76 ಪೊಲೀಸರಿಗೆ ಕೊರೋನಾ ! ಮಹಾರಾಷ್ಟ್ರ ಫಸ್ಟ್;ಕರ್ನಾಟಕ ಫಿಫ್! ಗೋವಾದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ......

76 ಪೊಲೀಸರಿಗೆ ಕೊರೋನಾ



ಕೊರೋನಾ ಸೋಂಕಿನ ಎರಡನೇ ಅಲೆ ಪೊಲೀಸ್ ಇಲಾಖೆಯನ್ನು ತೀವ್ರವಾಗಿ ಕಾಡಿದ್ದು, ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 76 ಪೊಲೀಸ್ ಅಧಿಕಾರಿ & ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಈವರೆಗೆ 614 ಪೊಲೀಸರಿಗೆ

 

ಸೋಂಕು ತಗುಲಿದ್ದು, ಇದರಲ್ಲಿ 85 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಜ್ಆಗಿದ್ದಾರೆ .

ಇನ್ನು 23 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದು, 502 ಪೊಲೀಸರು ಮನೆಯಲ್ಲೇ ಐಸೋಲೇಷನ್ 

ಆಗಿ ಚಿಕಿತ್ಸೆ ಪಡೆಯುತ್ತಿದ್ದರೆ, 5
ಪೊಲೀಸರು ಮೃತಪಟ್ಟಿದ್ದಾರೆ.


ಮಹಾರಾಷ್ಟ್ರ ಫಸ್ಟ್;ಕರ್ನಾಟಕ ಫಿಫ್!


ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,293 ಸಾವುಗಳು
ವರದಿಯಾಗಿದ್ದು, 79% ಪ್ರಕರಣಗಳು 10 ರಾಜ್ಯಗಳಲ್ಲಿವೆ.ಮಹಾರಾಷ್ಟ್ರದಲ್ಲಿ 895 
ಸಾವಿನ ಪ್ರಕರಣಗಳು ವರದಿಯಾಗುವ ಮೊದಲ ಸ್ಥಾನದಲ್ಲಿದ್ದರೆ, 
ದೆಹಲಿ (381) 2ನೇ ಸ್ಥಾನದಲ್ಲಿದೆ. 

ಉತ್ತರ ಪ್ರದೇಶ 264 & ಛತ್ತೀಸ್ ಗಢ
246 ಸಾವುಗಳೊಂದಿಗೆ ಕ್ರಮವಾಗಿ 3&4ನೇ ಸ್ಥಾನದಲ್ಲಿವೆ.
ಇನ್ನು ಕರ್ನಾಟಕ (180) 5ನೇ ಸ್ಥಾನದಲ್ಲಿದೆ. ಉಳಿದಂತೆ ಗುಜರಾತ್ 170,ಜಾರ್ಖಂಡ್ 131, ರಾಜಸ್ಥಾನ್ 121,ಪಂಜಾಬ್ 106 & ಮಧ್ಯ ಪ್ರದೇಶದಲ್ಲಿ 98 ಕೇಸ್ದಾಖಲಾಗಿವೆ.


ಗೋವಾದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ


ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಹಾರಾಷ್ಟ್ರ, ಕರ್ನಾಟಕ 
ನಂತರ ಈಗ ನೆರೆಯ ಗೋವಾದಲ್ಲೂ ಲಾಕ್ ಡೌನ್ ಹೇರಲಾಗಿದೆ. ನಾಳೆ
(ಏ.29) ಸಂಜೆಯಿಂದ ಮೇ 3ರ ಬೆಳಿಗ್ಗೆಯವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು
 ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ತಿಳಿಸಿದ್ದಾರೆ. ಅಗತ್ಯ ಸೇವೆಗಳು ಲಭ್ಯವಿರಲಿದ್ದು, 
ಜನರು ಆತಂಕಪಡಬೇಕಾಗಿಲ್ಲ
ಎಂದು ತಿಳಿಸಿರುವ ಸಿಎಂ, ಕಾರ್ಮಿಕರು ಹಿಂದಿರುಗಬಾರದು ಎಂದು 
ಮನವಿ ಮಾಡಿದ್ದಾರೆ. ಈ ಸಂಬಂಧ ಶೀಘ್ರ ಮಾರ್ಗಸೂಚಿ ಪ್ರಕಟವಾಗಲಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು