ಇಂದು ತಟ್ಟೆ, ಲೋಟ ಬಡಿಯಲಿರುವ ಸಾರಿಗೆ ಸಿಬ್ಬಂದಿ !

 

ಇಂದು ತಟ್ಟೆ, ಲೋಟ ಬಡಿಯಲಿರುವ ಸಾರಿಗೆ ಸಿಬ್ಬಂದಿ

ಆರನೇ ವೇತನ ಆಯೋಗದ ಶಿಫಾರಸು

ಜಾರಿಗೊಳಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು



ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು ಆರನೇ

ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರು ಹಾಗೂ ಸರ್ಕಾರದ

ನಡುವಿನ ಹಗ್ಗಜಗ್ಗಾಟ ಮುಂದುವರೆದಿದ್ದು, ಪ್ರಯಾಣಿಕರು

ಪರದಾಡುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗದ ನೌಕರರ

ಮಾರ್ಚ್ ತಿಂಗಳದ ವೇತನ ತಡೆಹಿಡಿಯಲು ಸರ್ಕಾರ

ನಿರ್ಧರಿಸಿದೆ. 

ಈ ಮಧ್ಯೆ, ರಾಜ್ಯಾದ್ಯಂತ ಇಂದು ಸಾರಿಗೆ ಸಿಬ್ಬಂದಿ & ಅವರ ಕುಟುಂಬಸ್ಥರು ತಟ್ಟೆ, ಲೋಟ ಬಡಿದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.


ಸಾರಿಗೆ ನೌಕರರ ಬೇಡಿಕೆ ನ್ಯಾಯ ಸಮ್ಮತವಾಗಿಲ್ಲ'


ಸಾರಿಗೆ ನೌಕರರ ಎಲ್ಲ ಬೇಡಿಕೆಯನ್ನು 

ಈಡೇರಿಸುವುದಕ್ಕೆ ಸಾಧ್ಯವಿಲ್ಲ, ನೌಕರರು ಕೋಡಿಹಳ್ಳಿ 

ಚಂದ್ರಶೇಖರ್ ನಾಯಕತ್ವವನ್ನು ಬಿಟ್ಟು, ಸರ್ಕಾರದ 

ಜೊತೆ ಮಾತುಕತೆ ನಡೆಸಲಿ ಎಂದು ಗ್ರಾಮೀಣಾಭಿವೃದ್ಧಿ

 ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. 

ಮಂಗಳೂರಿನಲ್ಲಿ

ಮಾತನಾಡಿದ ಅವರು, 'ಸಾರಿಗೆ ನೌಕರರ ಬೇಡಿಕೆ

ನ್ಯಾಯ ಸಮ್ಮತವಾಗಿಲ್ಲ. ಸರ್ಕಾರ ಈ ಬೇಡಿಕೆಯನ್ನು

ಒಪ್ಪುವುದಕ್ಕೂ ಸಾಧ್ಯವಿಲ್ಲ. ಕೋಡಿಹಳ್ಳಿ ಉದ್ದೇಶ

ಕೇವಲ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು

ಕುಂಠಿತಗೊಳಿಸುವುದಾಗಿದೆ' ಎಂದು ಹೇಳಿದ್ದಾರೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು