ಅಕ್ಕಿ ಕೇಳಿದ್ರೆ 'ಸತ್ತುಹೋಗಿ' ಎಂದ ಆಹಾರ ಸಚಿವ !ಆಕ್ಸಿಜನ್ ಸಿಲಿಂಡರ್ ಬೇಕೆಂದವನ ಬಂಧನ! 'ಲಾಕ್‌ಡೌನ್ ಮುಂದುವರೆಯಬಹುದು'

ಅಕ್ಕಿ ಕೇಳಿದ್ರೆ 'ಸತ್ತುಹೋಗಿ' ಎಂದ ಆಹಾರ ಸಚಿವ


ಅಕ್ಕಿ ಕೇಳಿದ ರೈತರಿಗೆ ಸತ್ತುಹೋಗಿ ಎಂದು ಹೇಳುವ

ಮೂಲಕ ಆಹಾರ ಸಚಿವ ಉಮೇಶ್ ಕತ್ತಿ ದುರಹಂಕಾರ

ಮೆರೆದಿದ್ದಾರೆ. ಸಚಿವರ ಈ ದರ್ಪಕ್ಕೆ ರಾಜ್ಯಾದ್ಯಂತ ವ್ಯಾಪಕ

ಟೀಕೆ ವ್ಯಕ್ತವಾಗುತ್ತಿದೆ. 'ಲಾಕ್ ಡೌನ್ ಹಿನ್ನೆಲೆ ಸಂಕಷ್ಟಕ್ಕೆ

ಸಿಲುಕಿದ್ದು, ಕಡಿಮೆ ಅಕ್ಕಿ ಕೊಡುತ್ತಿದ್ದೀರಾ? ಹೀಗಾದರೆ

ಹೇಗೆ?' ಎಂದು ರೈತ ಈಶ್ವರ್ ಎನ್ನುವವರು ಕತ್ತಿ ಅವರಿಗೆ

ಕರೆ ಮಾಡಿ ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವ ಕತ್ತಿ, 'ಸತ್ತು

ಹೋಗು.. ನನಗೆ ಕರೆ ಮಾಡಬೇಡ' ಎಂದು ತಮ್ಮ ದೌಲತ್ತು

ಪ್ರದರ್ಶಿಸಿದ್ದಾರೆ.

ಆಕ್ಸಿಜನ್ ಸಿಲಿಂಡರ್ ಬೇಕೆಂದವನ ಬಂಧನ



ಅಜ್ಜನಿಗಾಗಿ ಆಕ್ಸಿಜನ್ ಸಿಲಿಂಡರ್ ಕೊಡಿ ಎಂದು

ದ್ವೀಟ್ ಮಾಡಿದ ಯುವಕನ ವಿರುದ್ಧ ಉತ್ತರ ಪ್ರದೇಶದ

ಪೊಲೀಸರು FIR ದಾಖಲು ಮಾಡಿದ್ದಾರೆ. ಈ ಕುರಿತು

ಮಾಹಿತಿ ನೀಡಿದ ಪೊಲೀಸರು, 'ಯುವಕ ಆಕ್ಸಿಜನ್

ಸಿಲಿಂಡರ್ ಬೇಕು ಎನ್ನುವುದರ ಕುರಿತು ಸರಿಯಾದ

ಮಾಹಿತಿ ನೀಡಿಲ್ಲ. ಈ ರೀತಿ ಹೇಳುವ ಮೂಲಕ ಸಿಲಿಂಡರ್

ಕೊರತೆ ಎನ್ನುವ ಭಯವನ್ನು ಹುಟ್ಟಿಸುವ ಹುನ್ನಾರ ಎಂಬ

ಆರೋಪದಡಿ ಬಂಧಿಸಲಾಗಿದೆ ಎಂದಿದ್ದಾರೆ.


'ಲಾಕ್‌ಡೌನ್ ಮುಂದುವರೆಯಬಹುದು'



ಕೊರೋನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ

ಸರ್ಕಾರ ವಿಧಿಸಿರುವ ಲಾಕ್‌ಡೌನ್ ಮುಂದುವರೆಯುವ

ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ಸುಳಿವು ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು,

'ಲಾಕ್‌ಡೌನ್

ಮುಂದುವರಿಕೆ ಅನಿವಾರ್ಯತೆ ಆಗಬಹುದು ಎಂದು

ಹೇಳುವ ಮೂಲಕ ಮತ್ತೊಂದು ವಾರ ಲಾಕ್‌ಡೌನ್‌ ಬಗ್ಗೆ

ಸಚಿವರು ಸುಳಿವು ಕೊಟ್ಟಿದ್ದಾರೆ. ಸದ್ಯ ಇರುವ ಪರಿಸ್ಥಿತಿಗೆ

ಜನರು ತಮಗೆ ಸಹಕರಿಸಬೇಕು ಎಂದು ಹೇಳಿದ್ದಾರೆ.




Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು