ವಿಶ್ವದ ಅತಿದೊಡ್ಡ ಕೊರೋನಾ ಲಸಿಕೆ ಅಭಿಯಾನ
ದೇಶದಲ್ಲಿ ನಡೆಯುತ್ತಿದ್ದು, ಜನರಿಗೆ ಕೊವಿಶೀಲ್ &
ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಈ ಮಧ್ಯೆ ರಾಜ್ಯದ
ಜನರಿಗೊಂದು ಶುಭ ಸುದ್ದಿ ಬಂದಿದ್ದು, ಕೊವ್ಯಾಕ್ಸಿನ್ ಘಟಕ
ರಾಜ್ಯದಲ್ಲಿ ಆರಂಭವಾಗಲಿದೆ. ಹೌದು, ಕೋಲಾರದ
ಮಾಲೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಭಾರತ್
ಬಯೋಟೆಕ್ ನ ಕೊವ್ಯಾಕ್ಸಿನ್ ಉತ್ಪಾದನಾ ಘಟಕ ಶೀಘ್ರ
ಆರಂಭವಾಗಲಿದ್ದು, ಹೈದ್ರಾಬಾದ್ ಗೆ ಹೋಲಿಸಿದರೆ ಇಲ್ಲಿ 5
ಪಟ್ಟು ಹೆಚ್ಚು ಲಸಿಕೆ ಉತ್ಪಾದನೆ ಮಾಡಲಾಗುತ್ತದೆ ಎಂದು
ತಿಳಿದುಬಂದಿದೆ.
ಇಂದೇ 5,279 ಸೋಂಕು: ಯಾವ ಜಿಲ್ಲೆಯಲ್ಲಿ,ಎಷ್ಟು?
ಬಾಗಲಕೋಟೆ-22, ಬಳ್ಳಾರಿ-40, ಬೆಳಗಾವಿ-17,
ಬೆಂಗಳೂರು ಗ್ರಾಮಾಂತರ-34, ಬೆಂಗಳೂರು
ನಗರ-3,728, ಬೀದರ್-264, ಚಾಮರಾಜನಗರ-30,
ಚಿಕ್ಕಬಳ್ಳಾಪುರ-15, ಚಿಕ್ಕಮಗಳೂರು-32, ಚಿತ್ರದುರ್ಗ-27,
ದಕ್ಷಿಣ ಕನ್ನಡ-56, ದಾವಣಗೆರೆ-9, ಧಾರವಾಡ-55,
ಗದಗ-13, ಹಾಸನ-72, ಹಾವೇರಿ-4, ಕಲಬುರಗಿ-181,
ಕೊಡಗು-15, ಕೋಲಾರ-82, ಕೊಪ್ಪಳ-20, ಮಂಡ್ಯ-48,
ಮೈಸೂರು-165, ರಾಯಚೂರು-17, ರಾಮನಗರ-16,
ಶಿವಮೊಗ್ಗ-24, ತುಮಕೂರು-139, ಉಡುಪಿ-59, ಉತ್ತರ
ಕನ್ನಡ-51, ವಿಜಯಪುರ-27, ಯಾದಗಿರಿ-17.
0 ಕಾಮೆಂಟ್‌ಗಳು
hrithiksuraj2@gmail.com