BREAKING: ಭಾಗಶಃ ಲಾಕ್ ಡೌನ್ ವಿಸ್ತರಣೆ!ಬಳ್ಳಾರಿಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ: ಆನಂದ್ ಸಿಂಗ್. BREAKING: ಎಚ್ಚರ... ಎಚ್ಚರ... ಎಚ್ಚರ...!

 BREAKING: ಭಾಗಶಃ ಲಾಕ್ ಡೌನ್ ವಿಸ್ತರಣೆ!



ಕೊರೋನಾ ಕರ್ಪ್ಯೂ ಹೇರಿರುವ ಜೊತೆಗೆ ಶನಿವಾರ,

ಭಾನುವಾರದಂದು ವೀಕೆಂಡ್ ಕರ್ಪ್ಯೂ ಹೇರಲಾಗಿದೆ.

ಇದನ್ನು ಇಡೀ ವಾರಕ್ಕೆ ವಿಸ್ತರಿಸುವಂತೆ ಸರ್ಕಾರಕ್ಕೆ

ಸಲಹೆಗಳು ಬಂದಿವೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ

ಸ್ಪಷ್ಟಪಡಿಸಿದ್ದಾರೆ. ಜೀವನಾಂಶ ಬಹಳ ಮುಖ್ಯ,

ಹಾಗೆಯೇ ಆರೋಗ್ಯವೂ ಮುಖ್ಯ. ವೀಕೆಂಡ್ ಕರ್ಪ್ಯೂ

ಮುಂದುವರಿಸುವ ಬಗ್ಗೆ ಸಲಹೆ ಬಂದಿದೆ. ಜನರ ಬದುಕಿಗೆ

ಅನುವು ಮಾಡಿಕೊಡುವಂತೆ ಕರ್ಪ್ಯೂ ಹೇರಲಾಗಿದೆ.

ಇದನ್ನು ಮುಂದುವರಿಸಬೇಕಾ, ಬೇಡವಾ? ಎಂಬ ಬಗ್ಗೆ

ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.



ಬಳ್ಳಾರಿಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ: ಆನಂದ್
ಸಿಂಗ್



ಬಳ್ಳಾರಿ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಸಮಸ್ಯೆ

ಇಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್

ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬಳ್ಳಾರಿಯ ಜಿಂದಾಲ್ ನಲ್ಲಿ

ಆಕ್ಸಿಜನ್ ಉತ್ಪಾದಿಸಲಾಗುತ್ತದೆ. ಹಾಗಾಗಿ ಉತ್ಪಾದನೆ

ಹೆಚ್ಚಿಸುವಂತೆ ಜಿಂದಾಲ್ ಸಂಸ್ಥೆಯ ಮುಖ್ಯಸ್ಥರೊಂದಿಗೆ

ಮಾತುಕತೆ ನಡೆಸಿದ್ದು, ಹೆಚ್ಚು ಆಕ್ಸಿಜನ್ ಉತ್ಪಾದನೆಗೆ

ಒಪ್ಪಿದ್ದಾರೆ. ಆದರೆ ಜಿಲ್ಲೆಯಲ್ಲಿ ವೆಂಟಿಲೇಟರ್ ಸಮಸ್ಯೆ

ಇದ್ದು, 30 ವೆಂಟಿಲೇಟರ್ ಗಳ ವ್ಯವಸ್ಥೆ ಮಾಡುವಂತೆ

ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.


BREAKING: ಎಚ್ಚರ... ಎಚ್ಚರ... ಎಚ್ಚರ...!



ರಾಜ್ಯದ ಕೊರೋನಾ ಸೋಂಕಿತರ ಕುಟುಂಬಸ್ಥರು

ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೊರೋನಾ ಸೋಂಕಿತರು ಮೃತಪಟ್ಟರೆ ಆಸ್ಪತ್ರೆಯೊಳಗಿನ

ಸಿಬ್ಬಂದಿ ಮೃತದೇಹದಲ್ಲಿರುವ ಆಭರಣ,

ಮೊಬೈಲ್ ಇನ್ನಿತರೇ ಬೆಲೆಬಾಳುವ ವಸ್ತುಗಳನ್ನು

ಲಪಟಾಯಿಸುತ್ತಿದ್ದಾರೆ. ಈ ಬಗ್ಗೆ ಕುಟುಂಬಸ್ಥರು

ಕೇಳಿದರೂ ಜವಾಬ್ದಾರಿ ಹೊತ್ತುಕೊಳ್ಳುತ್ತಿಲ್ಲ. ಹೀಗೆಯೇ

ಕೊರೋನಾ ಸೋಂಕಿತರ ಸಾಕಷ್ಟು ಮಂದಿ ಕುಟುಂಬಸ್ಥರು

ತಮ್ಮವರ ಬಳಿ ಇದ್ದ ಒಡವೆ ಕಳೆದುಕೊಂಡಿದ್ದಾರೆ. ಇಂತಹ

ಪ್ರಕರಣಗಳು ಬೆಂಗಳೂರಿನಲ್ಲೇ ಹೆಚ್ಚು ವರದಿಯಾಗಿವೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು