ಮನೆಯಲ್ಲೇ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದೀರಾ?ಹೋಮ್ ಕ್ವಾರಂಟೈನ್ vs ಹೋಮ್ ಐಸೊಲೇಶನ್

ಮನೆಯಲ್ಲೇ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದೀರಾ?



ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ

ರೋಗಿಗಳು ದಿನಕ್ಕೆ 3 ಬಾರಿ ಆಕ್ಸಿಜನ್ ಮಟ್ಟವನ್ನು

ಪರೀಕ್ಷಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಆಸ್ಪತ್ರೆಗೆ

ಸೇರುವ ಅಗತ್ಯವಿದೆಯೇ ಎಂಬುದನ್ನು ತಿಳಿಯಲು

ಆಕ್ಸಿಮೀಟರ್ ನಲ್ಲಿ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಬೇಕು.

ಆಕ್ಸಿಮೀಟರ್ ಒಳಗೆ ಬೆರಳು ಇಡುವ ಮುನ್ನ ನೇಲ್

ಪಾಲಿಶ್, ಕೃತಕ ಉಗುರನ್ನು ತೆಗೆಯಬೇಕು. ತಣ್ಣಗಿದ್ದರೆ

ಕೈಗಳನ್ನು ಉಜ್ಜಿ ಬಿಸಿ ಮಾಡಿಕೊಳ್ಳಬೇಕು.


ಹೋಮ್ ಕ್ವಾರಂಟೈನ್ vs ಹೋಮ್ ಐಸೊಲೇಶನ್



ಸ್ವಲ್ಪ ಜ್ವರ, ಆಮ್ಲಜನಕ ಮಟ್ಟ 95/ಅದಕ್ಕೂ ಹೆಚ್ಚಿರುವ

ಸೋಂಕಿತರು ಮನೆಯಲ್ಲಿರುವುದು ಹೋಮ್

ಐಸೋಲೇಶನ್. ಇವರಿಗೆ ಪ್ರತ್ಯೇಕ ವ್ಯವಸ್ಥೆಯಿರಬೇಕು.

ನಿಗಾ ಇಡಲು ಒಬ್ಬ ವ್ಯಕ್ತಿ ಬೇಕು. ವೈದ್ಯರ ನಿರಂತರ

ಸಂಪರ್ಕ ಇರಬೇಕು. ಹೋಮ್ ಕ್ವಾರಂಟೈನ್ ಗೆ

ಒಳಪಡುವವರು ಸೋಂಕಿತರಲ್ಲ. ಸೋಂಕಿತರ ಸಂಪರ್ಕಕ್ಕೆ

ಬಂದಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲಿಯೇ

14 ದಿನ ಪ್ರತ್ಯೇಕವಾಗಿ ವಾಸವಿರುವವರು.





Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು