ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ ! ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು: ಆರೋಗ್ಯಸಚಿವರು ಹೇಳಿದ್ದೇನು? FLASH: ಒಂದೇ ದಿನ 2,812 ಜನರ ಸಾವು ! ನಿಯಮ ಉಲ್ಲಂಘನೆ; 7 ಮಂದಿ ಅರೆಸ್ಟ್!

ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ



ವಾತಾವರಣದ ಗಾಳಿಯಿಂದ ಆಮ್ಲಜನಕ ಹೀರಿ

ಕೊರೋನಾ ರೋಗಿಗಳಿಗೆ ಪೂರೈಸುವ ಮಹತ್ವದ

ಯೋಜನೆಗೆ ಸರ್ಕಾರ ಮುಂದಡಿ ಇಟ್ಟಿದೆ. 'ಪ್ರೆಷರ್

ಸ್ವಿಂಗ್ ಅಡ್ಕೊಪ್ಪನ್' ತಂತ್ರಜ್ಞಾನ ಬಳಸಿ 93.3%ರಷ್ಟು

ಆಮ್ಲಜನಕ ಪೂರೈಸಲು ಸಾಧ್ಯವಿದ್ದು, ಇದು ಯೋಧರಿಗಾಗಿ

ರೂಪಿಸಿರುವ ತಂತ್ರಜ್ಞಾನ. ಬೆಳಗಾವಿ, ಬೆಂಗಳೂರಿನ

ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಈ ಮಾದರಿಗಳು

ಕಾರ್ಯಾಚರಿಸುತ್ತಿದ್ದು, ಇದರಲ್ಲಿ ನಿಮಿಷಕ್ಕೆ 2/5/7/10

ಲೀ.ನಷ್ಟು ಆಕ್ಸಿಜನ್ ದೊರೆಯುತ್ತದೆ.



ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು: ಆರೋಗ್ಯಸಚಿವರು ಹೇಳಿದ್ದೇನು?



ಆಕ್ಸಿಜನ್ ಕೊರತೆಯಿಂದ ಕೋಲಾರದಲ್ಲಿ ನಾಲ್ವರು

ಕೊರೋನಾ ಸೋಂಕಿತರು ಸಾವನ್ನಪ್ಪಿದ ಕುರಿತು ಸಚಿವ

ಡಾ.ಕೆ.ಸುಧಾಕರ್ ಇಂದು ಮಾಹಿತಿ ನೀಡಿದ್ದು, ಆಕ್ಸಿಜನ್

ಸರಿಯಾದ ಸಮಯಕ್ಕೆ ಪೂರೈಸಲು ಶ್ರಮಿಸುತ್ತಿದ್ದೇವೆ

ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಡಿಹೆಚ್‌

ಅವರಿಂದ ಮಾಹಿತಿ ಪಡೆಯುವೆ. ಯಾವ ಕಾರಣಕ್ಕೆ

ಮೃತಪಟ್ಟಿದ್ದಾರೆಂದು ತಿಳಿದುಕೊಂಡು ಹೇಳುತ್ತೇನೆ ಎಂದ

ಅವರು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ

ನಿಯಂತ್ರಣ ಕುರಿತು ಗಂಭೀರ ಚರ್ಚೆ ನಡೆಸುತ್ತೇವೆ ಎಂದು

ತಿಳಿಸಿದ್ದಾರೆ.


FLASH: ಒಂದೇ ದಿನ 2,812 ಜನರ ಸಾವು



ದೇಶದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ

ಮುಂದುವರೆದಿದ್ದು, ಇಂದು ಮತ್ತೊಮ್ಮೆ ಮೂರೂವರೆ

ಲಕ್ಷಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದೆ ಹಾಗೂ

2 ಸಾವಿರಕ್ಕಿಂತ ಹೆಚ್ಚು ಜನರು ಹೆಮ್ಮಾರಿಯಿಂದಾಗಿ

ಪ್ರಾಣಬಿಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ

ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,52,991

ಹೊಸ ಸೋಂಕು ಪ್ರಕರಣಗಳು & 2,812 ಸಾವು

ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕು

ಪ್ರಕರಣಗಳ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದ್ದು,

ಮೃತರ ಸಂಖ್ಯೆ 1,92,311ಕ್ಕೆ ತಲುಪಿದೆ.


 

ನಿಯಮ ಉಲ್ಲಂಘನೆ; 7 ಮಂದಿ ಅರೆಸ್ಟ್!



ಬೆಂಗಳೂರಿನಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ

ಹಿನ್ನೆಲೆ ಸರಕಾರ ಏ.21ರಿಂದ ಮೇ 4ರವರೆಗೆ ಕೆಲವು

ನಿಯಮಗಳನ್ನು ರೂಪಿಸಿ ಮಾರ್ಗಸೂಚಿಗಳೊಂದಿಗೆ

ಆದೇಶ ಜಾರಿಗೊಳಿಸಿದೆ. ಆದರೂಆದೇಶ ಉಲ್ಲಂಘಿಸಿ

ತಮ್ಮ ಅಂಗಡಿಗಳ ಮುಂದೆ ಸಾಮಾಜಿಕ ಅಂತರ

ಕಾಯ್ದುಕೊಳ್ಳದೆ ಅವಧಿ ಮೀರಿ ಚಟುವಟಿಕೆ ನಡೆಸಿದ

ಆರೋಪದ ಮೇಲೆ 6 ಪ್ರಕರಣಗಳನ್ನು ದಾಖಲಿಸಿ

7 ಜನರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಮೇ

5ರವರೆಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ

ಒಳಪಡಿಸಲಾಗಿದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು