ಒಂದೇ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದ ಚಾಹಲ್!ಟಿ20 ಕ್ರಿಕೆಟ್ ನಲ್ಲಿ ಕೊಹ್ಲಿ ಹೊಸ ಸಾಧನೆ

 ಒಂದೇ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದ ಚಾಹಲ್!


ಆರ್‌ಸಿಬಿಯ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್

ಒಂದೇ ಪಂದ್ಯದಲ್ಲಿ ಅತಿ ವಿಶಿಷ್ಟ 'ಶತಕ' ಹಾಗೂ 'ದ್ವಿಶತಕ'ದ ದಾಖಲೆಗೆ ಪಾತ್ರವಾಗಿದ್ದಾರೆ. ಹೌದು, ಐಪಿಎಲ್‌ನಲ್ಲಿ 100 ಪಂದ್ಯಗಳ ಮೈಲುಗಲ್ಲನ್ನು ಚಹಾಲ್ ತಲುಪಿದ್ದಾರೆ.

ಹಾಗೆಯೇ ಒಟ್ಟಾರೆಯಾಗಿ 200ನೇ ಟ್ವೆಂಟಿ-20

ಪಂದ್ಯಗಳನ್ನು ಆಡಿರುವ ದಾಖಲೆಗೂ ಭಾಜನವಾಗಿದ್ದಾರೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಚಾಹಲ್ 15 ಪಂದ್ಯಗಳಲ್ಲಿ ಆಡಿ, 21 ವಿಕೆಟ್ ಪಡೆದಿದ್ದರು. 19.28 ಸರಾಸರಿ & 7.08 ಎಕಾನಮಿಯಲ್ಲಿ ಚಾಹಲ್ ಬೌಲಿಂಗ್ ಮಾಡಿದ್ದರು.


ಟಿ20 ಕ್ರಿಕೆಟ್ ನಲ್ಲಿ ಕೊಹ್ಲಿ 

ಹೊಸ ಸಾಧನೆ


ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ

ಹೊಸ ಸಾಧನೆ ಮಾಡಿದ್ದಾರೆ. ಐಪಿಎಲ್ ಉದ್ಘಾಟನಾ

ಪಂದ್ಯದಲ್ಲಿ 33 ರನ್ ಗಳಿಸಿದ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ

ನಾಯಕನಾಗಿ 6 ಸಾವಿರ ರನ್(168 ಇನ್ನಿಂಗ್ಸ್) ಗಡಿ

ದಾಟಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ

ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು, ಟಿ20

ಕ್ರಿಕೆಟ್ ನಲ್ಲಿ 5872 ರನ್ ಗಳಿಸಿರುವ ಚೆನ್ನೈ ನಾಯಕ

ಧೋನಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, 4242 ರನ್

ಕಲೆಹಾಕಿರುವ ಗಂಭೀರ್ 3ನೇ ಸ್ಥಾನದಲ್ಲಿದ್ದಾರೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು