ಐಪಿಎಲ್ ಇತಿಹಾಸದಲ್ಲಿ 4 ಬಾರಿ ಡಕ್ ಔಟ್ ಆದ ಧೋನಿ ! IPL: 600 ಬೌಂಡರಿಗಳ ದಾಖಲೆ ಸರದಾರ.


ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಿಎಸ್‌ಕೆ ನಡುವಿನ 2ನೇ IPL ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಶೆ ಮೂಡಿಸಿದರು. 

ಇನ್ನು ಧೋನಿ ಡಕ್ ಔಟ್ ಆಗಿದ್ದು ಇದೇ ಮೊದಲೇನಲ್ಲ. 

ಇದುವರೆಗೂ 4 ಬಾರಿ ಧೋನಿ IPLನಲ್ಲಿ ಶೂನ್ಯ ಸುತ್ತಿದ್ದಾರೆ.

 2010ರಲ್ಲಿ ಡಿರ್ಕ್ ನ್ಯಾನ್ಸ್ ಮತ್ತು ವಾಟ್ಸನ್‌ಗೆ ವಿಕೆಟ್ ಒಪ್ಪಿಸಿದರೆ, 2015ರಲ್ಲಿ ಹರ್ಭಜನ್ ಸಿಂಗ್ ಮತ್ತು ಪ್ರಸ್ತುತ ಅವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.


IPL: 600 ಬೌಂಡರಿಗಳ ದಾಖಲೆ 

ಸರದಾರ

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೆಲ್ಲಿಯ ಶಿಖರ್ ಧವನ್ (85) ತಮ್ಮ
ಐಪಿಎಲ್ ಕರಿಯರ್ ನ 42ನೇ ಅರ್ಧಶತಕ ಗಳಿಸಿದರು.

ಈ ಪಂದ್ಯದಲ್ಲಿ 10 ಬೌಂಡರಿ ಬಾರಿಸಿದ ಧವನ್, ಐಪಿಎಲ್
ಇತಿಹಾಸದಲ್ಲಿ 600 ಬೌಂಡರಿ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. 

ಅಲ್ಲದೆ, ಐಪಿಎಲ್ ನಲ್ಲಿ ಒಟ್ಟು
5282 ರನ್ ಗಳಿಸಿರುವ ಎಡಗೈ ಆಟಗಾರ, ವಾರ್ನರ್ ಹಿಂದಿಕ್ಕಿ ಕೊಹ್ಲಿ & ರೈನಾ ನಂತರ ಐಪಿಎಲ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ
ಪಾತ್ರರಾಗಿದ್ದಾರೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು