ಅಪ್ಪ-ಅಮ್ಮನ ಕಣ್ಣೀರು ನೋಡಿದ್ರೆ ಜೀವ ಹೋಗುತ್ತೆ: ರಾಗಿಣಿ !ನಟಿ ಶ್ವೇತಾ ಚಂಗಪ್ಪಗೆ ಕೊರೋನಾ ಪಾಸಿಟಿವ್.


ನಟಿ ರಾಗಿಣಿ ದ್ವಿವೇದಿ & ಸಂಜನಾ ಗರ್ಲಾನಿ ಡ್ರಗ್ಸ್ ವಿಚಾರದಲ್ಲಿ ಜೈಲು ಸೇರಿ ಹೊರಬಂದಿದ್ದಾರೆ. 

ಯುಗಾದಿ ಸಂಭ್ರಮ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರು ಪಾಲ್ಗೊಂಡಿದ್ದು, ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. 

'ಇಡೀ ಪ್ರಪಂಚವನ್ನು ತಪ್ಪಾಗಿತೆ ಗೆದುಕೊಂಡು ಹೋರಾಟ ಮಾಡಬಹುದು.

 ಆದರೆ ಅಪ್ಪ-ಅಮ್ಮನ ಕಣ್ಣಲ್ಲಿನ ನೀರು ನೋಡಿದ್ರೆ ಪ್ರಾಣ ಹೋದಹಾಗೇ ಆಗುತ್ತೆ ಎಂದು ರಾಗಿಣಿ ಹೇಳಿದ್ದು, ಯಾರೂ ನಮ್ಮವರಲ್ಲ, ಯಾರೂ ಬರಲಿಲ್ಲ, ತುಂಬ ಬೇಜಾರಾಯ್ತು ಎಂದು ಸಂಜನಾ ಹೇಳಿಕೊಂಡಿದ್ದಾರೆ.



ನಟಿ ಶ್ವೇತಾ ಚಂಗಪ್ಪಗೆ 

ಕೊರೋನಾ ಪಾಸಿಟಿವ್


ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಇದೀಗ ನಟಿ ಶ್ವೇತಾ ಚಂಗಪ್ಪ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 

ಈ ಬಗ್ಗೆ ಸ್ವತಃ ಶ್ವೇತಾ ಚಂಗಪ್ಪ ಮಾಹಿತಿ ಹಂಚಿಕೊಂಡಿದ್ದು, 'ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಿರುವೆ.

ಅವರು ಕೊಟ್ಟಿರುವ ಔಷಧವನ್ನು ತೆಗೆದುಕೊಳ್ಳುತ್ತಿದ್ದೇನೆ,ನನ್ನೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೂಡಲೇ ತಪಾಸಣೆ ಮಾಡಿಸಿಕೊಂಡು ಕೊರೋನಾ ಸೋಂಕು ತಗುಲದಂತೆ ಜಾಗ್ರತೆ ವಹಿಸಿ' ಎಂದು ಮನವಿ ಮಾಡಿದ್ದಾರೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು