ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು
ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾದರೆ
ನೆಲ್ಲಿಕಾಯಿ ಫೇಸ್ ಪ್ಯಬ್ ತಯಾರಿಸಿ ಮುಖಕ್ಕೆ ಹಚ್ಚಿ.
ನೆಲ್ಲಿಕಾಯಿ ಪೇಸ್ಟ್ 2 ಚಮಚ, ಸಕ್ಕರೆ 2 ಚಮಚ, ರೋಸ್
ವಾಟರ್ 1 ಚಮಚ, ಈ ಎಲ್ಲಾ ಪದಾರ್ಥಗಳನ್ನು ಮಿಕ್ಸ್
ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. 10 ನಿಮಿಷ
ಬಿಟ್ಟು ಮುಖವನ್ನು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು
15 ದಿನಕ್ಕೊಮ್ಮೆ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
ಹಲ್ಲಿಗೆ ಬಳಸುವ ಪೇಸ್ಟ್ನ ಮತ್ತಷ್ಟು
ಉಪಯೋಗ....
* ಪೀಠೋಪಕರಣ ಅಥವಾ ಮೇಜಿನ ಮೇಲೆ ಚಹಾದ
ಕಲೆಯಾದರೆ ಬಟ್ಟೆಗೆ ಪೇಸ್ಟ್ ಹಚ್ಚಿ ಸರಿಯಾಗಿ ಉಜ್ಜಿದರೆ
ಕಲೆ ಮಾಯಾವಾಗುತ್ತೆ.
* ಮನೆ, ಕಾರಿನ ಗ್ಲಾಸ್ ಬ್ಲರ್ ಆಗಿದ್ದರೆ, ಪೇಸ್ಟ್ ಹಚ್ಚಿ
ಸ್ವಚ್ಚಗೊಳಿಸಬಹುದು.
* ಶೂ ಅತೀ ಕೊಳಕಾಗಿದ್ದು, ಸೋಪ್ ಬಳಸಲು ಆಗದೇ
ಇದ್ದಾಗ ಪೇಸ್ಟ್ ಹಚ್ಚಿ ಕ್ಲೀನ್ ಮಾಡಿ.
`ಬೆಳ್ಳುಳ್ಳಿ, ಈರುಳ್ಳಿಯನ್ನು ಕೊಚ್ಚಿದಾಗ ಕೈ ಗಬ್ಬು ವಾಸನೆ
ಬರುತ್ತೆ. ಆಗ ಪೇಸ್ಟ್ ಹಚ್ಚಿ ಕೈ ತೊಳೆಯಿರಿ. ಕಲೆಯೂ
ಮಾಯವಾಗುತ್ತೆ.
* ನೆನಪಿಡಿ, ಕಲರ್ ಇರುವ ಪೇಸ್ಟ್ಗಳನ್ನು ಇದಕ್ಕೆ
ಬಳಸಬಾರದು.
0 ಕಾಮೆಂಟ್‌ಗಳು
hrithiksuraj2@gmail.com