ದೇಹದ ತೂಕ ಇಳಿಸಲು ಇಲ್ಲಿದೆ ಸುಲಭ ಮಾರ್ಗ! ಕಲ್ಲಂಗಡಿ ಬೀಜ ಎಸೆಯಬೇಡಿ! *ಆಹಾರದಲ್ಲಿ ಸ್ವಾಭಾವಿಕವಾಗಿ ಕಬ್ಬಿಣಾಂಶವನ್ನು ಹೆಚ್ಚಿಸಿ

 








ನಿಮಗೆ ಅಜೀರ್ಣತೆ ಎದುರಾದ ವೇಳೆ ಸೋಂಪು ಕಾಳುಗಳು ತಕ್ಷಣಕ್ಕೆ ಪರಿಹಾರ ನೀಡುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ.

ಆದರೆ, ಕೆಲವೊಂದು ಸಂದರ್ಭಗಳಲ್ಲಿ

ಅಜೀರ್ಣತೆ ಎಂಬುದು ದೇಹದ ತೂಕ 

ಹೆಚ್ಚಾಗುವ ಪ್ರಕ್ರಿಯೆಯಲ್ಲಿ ಕೂಡ 

ಕಾರಣವಾಗುತ್ತದೆ. 

ಇಂತಹ ಸಮಯದಲ್ಲಿ ಆರೋಗ್ಯಕರವಾ

ದ ಕರುಳು ಮತ್ತು ಜೀರ್ಣಾಂಗವನ್ನು 

ಹೊಂದಲು & ನಿಮ್ಮ ದೇಹದ ತೂಕವನ್ನು

ನಿಯಂತ್ರಣ ಮಾಡಿಕೊಳ್ಳಲು ಸೋಂಪು 

ಕಾಳು ನೀರು ಸಹಾಯಕ್ಕೆ ಬರುತ್ತದೆ.


ಕಲ್ಲಂಗಡಿ ಬೀಜ ಎಸೆಯಬೇಡಿ



ಕಲ್ಲಂಗಡಿ ಬೀಜದಿಂದ ಹತ್ತು ಹಲವು ಪ್ರಯೋಜನಗಳಿವೆ.

ಹೌದು ಕಲ್ಲಂಗಡಿ ಬೀಜದಲ್ಲಿ ಪೊಟ್ಯಾಶಿಯಂ, ಜಿಂಕ್

ಹೇರಳವಾಗಿದ್ದು ಬೆನ್ನೆಲುಬಿನ ಆರೋಗ್ಯವನ್ನು

ಕಾಪಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಲು ನೆರವಾಗುತ್ತದೆ.

ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಕಲ್ಲಂಗಡಿ ಬೀಜವನ್ನು

ಪುಡಿಗೆ ಏಲಕ್ಕಿ ಮತ್ತು ಬೆಲ್ಲ ಹಾಕಿ ಸೇವಿಸುವುದರಿಂದ ರಕ್ತ

ಹೀನತೆ ಸಮಸ್ಯೆ ಬಹುಬೇಗ ದೂರವಾಗುತ್ತದೆ. ರಕ್ತಸಂಚಾರ

ಸುಗಮವಾಗುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


*ಆಹಾರದಲ್ಲಿ ಸ್ವಾಭಾವಿಕವಗಿ 

ಕಬ್ಬಿಣಾಂಶವನ್ನು ಹೆಚ್ಚಿಸಿ

 



ಸೊಪ್ಪು, ತರಕಾರಿ, ಹಣ್ಣುಗಳು, ಕೆಂಪು ಮಾಂಸ,

ಮೀನು, ದವಸಧಾನ್ಯಗಳು, ಮೊಳಕೆ ಕಾಳುಗಳು

ಮುಂತಾದವುಗಳಲ್ಲಿ ಕಬ್ಬಿಣಾಂಶವು ಹಚ್ಚಾಗಿರುತ್ತದೆ.

* ಕಬ್ಬಿಣದ ಬಾಣಲಿ, ಪಾತ್ರೆ, ಮಗಚುವ ಕೈ ಮುಂತಾದ

ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಪಾತ್ರೆಯಲ್ಲಿನ

ಕಬ್ಬಿಣಾಂಶವು ಸ್ವಾಭಾವಿಕವಾಗಿ 

ಆಹಾರದಲ್ಲಿ ಬೆರೆಯುತ್ತದೆ..

ಒಮ್ಮೆ ಬಿಸಿಯಾದ ಕಬ್ಬಿಣದ ಪಾತ್ರೆಯಲ್ಲಿ

 ತಾಪಮಾನವು ದೀರ್ಘಕಾಲ 

ಉಳಿಯುವುದರಿಂದ ಕಬ್ಬಿಣದ ಅಂಶ

ಆಹಾರದಲ್ಲಿ ಬೇಗ ಸೇರಿಕೊಳ್ಳುತ್ತದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು