# Breaking News ಯಾವುದೇ ಪ್ಯಾಕೇಜ್ ಘೋಷಿಸಲು ಸರ್ಕಾರ ನಕಾರ! ಮತ್ತೊಮ್ಮೆ ಜನರ ನಿರೀಕ್ಷೆ ಹುಸಿ ಮಾಡಿದ ರಾಜ್ಯ ಸರ್ಕಾರ ..

 


# Breaking News ಯಾವುದೇ ಪ್ಯಾಕೇಜ್ ಘೋಷಿಸಲು ಸರ್ಕಾರ ನಕಾರ














ಕೊರೋನಾ ಸಂಕಷ್ಟದಲ್ಲಿ ಸೋಂಕಿತರ ಜೀವವೇ ಮುಖ್ಯ. ಅವರನ್ನು ಉಳಿಸಲು 


ಸರ್ಕಾರ ಶ್ರಮಪಡುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.


ಕಡು ಬಡವರಿಗೆ ಉಚಿತ ಊಟ ನೀಡಲಾಗುತ್ತಿದ್ದು,ಬಿಪಿಎಲ್ ಕಾರ್ಡುದಾರರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ.


ಸಂಕಷ್ಟ ಅರಿತು ಮುಂದಿನ ದಿನಗಳಲ್ಲಿ ಪ್ಯಾಕೇಜ್ ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ.


ಈ ಮೂಲಕ ಪ್ರಸ್ತುತ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.



# ಮತ್ತೊಮ್ಮೆ ಜನರ ನಿರೀಕ್ಷೆ ಹುಸಿ ಮಾಡಿದ ರಾಜ್ಯ ಸರ್ಕಾರ




ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ. ಇನ್ನುಮುಂದೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡುತ್ತೇವೆ ಎಂದಿದ್ದಾರೆ.


ಆದರೆ 18-44 ವರ್ಷದೊಳಗಿನವರಿಗೆ ಯಾವಾಗ ಲಸಿಕೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿಲ್ಲ.ಸರ್ಕಾರದ ಪ್ರಕಾರ ಲಸಿಕೆ, ಬೆಡ್ ಎಲ್ಲ ಇದೆ. ಯಾವುದರ ಕೊರತೆಯೂ ಇಲ್ಲ.

ಎಲ್ಲಾ ರಾಜ್ಯಗಳಿಗಿಂತ ನಾವೇ ಬೆಸ್ಟ್ ಎಂದು ತಾನೇ ಬೆನ್ನು ತಟ್ಟಿಕೊಂಡಿದೆ.ಈ ಮೂಲಕ

ಆರ್ಥಿಕಪ್ಯಾಕೇಜ್ಘೋಷಣೆಯಾಗಬಹುದು ಎಂಬ ನಿರೀಕ್ಷೆ ಆಗಿತ್ತು ರಾಜ್ಯದ ಜನರು ಕೂಡ    ಅದನ್ನು ಪಡೆಯುತ್ತಿಲ್ಲ.




18 ರಿಂದ 44 ವರ್ಷದವರಿಗೆ ಲಸಿಕೆ: ತಾತ್ಕಾಲಿಕ ಮುಂದೂಡಿಕೆ- ಸಿಎಂ





ರಾಜ್ಯದಲ್ಲಿ ಲಾಕ್ ಡೌನ್ ನಂತರ ಕೊರೋನಾ ಸೋಂಕಿನ


ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು


ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ


ಸಚಿವರು, ಶಾಸಕರ ನೇತೃತ್ವದಲ್ಲಿ ನಡೆದ ಸಭೆ ಬಳಿಕ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ


ಕೊರೋನಾ ಲಸಿಕೆಯನ್ನು ಎರಡನೇ ಡೋಸ್


ಪಡೆಯುವವರಿಗೆ ಮೊದಲ ಆದ್ಯತೆಯಾಗಿ ನೀಡಲಾಗುತ್ತದೆ.


ಹಾಗಾಗಿ, 18ರಿಂದ 44 ವರ್ಷದವರಿಗೆ ಲಸಿಕೆ


ನೀಡುವುದಕ್ಕೆ ಸದ್ಯಕ್ಕೆ ತಾತ್ಕಾಲಿಕವಾಗಿ ಮುಂದೂಡಿಕೆ


ಮಾಡಲಾಗಿದೆ ಎಂದು ತಿಳಿಸಿದ್ದಾರೆ.





        


    



        












Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು