BREAKING: ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ಮೊದಲ ಬಲಿ?ಬೀದರಿಗೂ ಕಾಲಿಟ್ಟ ಬ್ಲಾಕ್ ಫಂಗಸ್!ಬ್ಲ್ಯಾಕ್ ಫಂಗಸ್ ಚಿಕಿತ್ಸೆ ದುಬಾರಿ!


BREAKING: ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ಮೊದಲ ಬಲಿ?!



 

ಕಲಬುರಗಿಯ ಅಶೋಕ ನಗರ ಠಾಣೆಯ ಮುಖ್ಯ ಪೇದೆಯೊಬ್ಬರು ಬ್ಲ್ಯಾಕ್ ಫಂಗಸ್ ಗೆ ಇಂದು ಬಲಿಯಾಗಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ನಿವಾಸಿ ಸಿಂಧುಶ್ರೀ(35) ಹಾಗೂ ಅವರ ಸಂಬಂಧಿ ಶ್ರೀನಿವಾಸ್ ಎಂಬುವವರು ನಿನ್ನೆಯೇ ಬ್ಲ್ಯಾಕ್ ಫಂಗಸ್ ನಿಂದಕೊನೆ ಯುಸಿರೆಳೆದಿದ್ದರು. ಹಾಗಾಗಿ ಸಿಂಧುಶ್ರೀ ಅವರೇ ಕರಿ ಹೆಮ್ಮಾರಿಗೆ ಬಲಿಯಾದ ಮೊದಲಿಗರು ಎನ್ನಲಾಗುತ್ತಿದೆ.ಆದರೆ

 

ಸರ್ಕಾರ ಮಾತ್ರ ಈ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ಒಟ್ಟಾರೆ ರಾಜ್ಯದಲ್ಲೂ ಬ್ಲ್ಯಾಕ್ ಫಂಗಸ್ ಸವಾರಿ ಶುರು ಮಾಡಿದೆ ಎಂದೇ ಊಹಿಸಲಾಗಿದೆ.




ಬೀದರಿಗೂ ಕಾಲಿಟ್ಟ ಬ್ಲಾಕ್ ಫಂಗಸ್!




ಬೀದರ್ ಜಿಲ್ಲೆಯಲ್ಲಿ ಕೊರೋನಾದಿಂದ ಗುಣಹೊಂದಿದ ಕೆಲವರಿಗೆ ಬ್ಲ್ಯಾಕ್ ಫಂಗಸ್ ಕಾಡುತ್ತಿದ್ದು, 12ಕ್ಕೂ ಹೆಚ್ಚು ಜನ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರು ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಸಾವು-ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಇನ್ನು ವೈದ್ಯರೊಬ್ಬರ ಪುತ್ರನ ದವಡೆಯಲ್ಲಿ ಈ ಫಂಗಸ್ ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಣ್ಣು, ಮೂಗು, ಹಲ್ಲಿನ ಸಮಸ್ಯೆ ಎಂದು ತೋರಿಸಿಕೊಂಡ 10 ಜನರಲ್ಲಿ ಫಂಗಸ್ ಖಚಿತವಾಗಿದೆ.


 


ಬ್ಲ್ಯಾಕ್ ಫಂಗಸ್ ಚಿಕಿತ್ಸೆ ದುಬಾರಿ!



 

ಬ್ಲ್ಯಾಕ್ ಫಂಗಸ್ ರೋಗಕ್ಕೆ ತುತ್ತಾದ ವ್ಯಕ್ತಿ ಚಿಕಿತ್ಸೆ ಪಡೆದುಕೊಳ್ಳಲು ಕನಿಷ್ಟ 2 ಲಕ್ಷ ರೂ.ವರೆಗೂ ಖರ್ಚು ಮಾಡಲೇಬೇಕಿದೆ. ಒಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲು

 

ಅಂದಾಜು 3 ತಾಸು ಬೇಕು. ಸ್ವಲ್ಪ ಸಮಯ ಮೀರಿದರೆ

ಆಪರೇಶನ್ ವೈಫಲ್ಯ ಕಾಣುವ ಸಾಧ್ಯತೆ ಹೆಚ್ಚು.

ಮಧುಮೇಹಿಗಳಿದ್ದರೆ ಶಸ್ತ್ರಚಿಕಿತ್ಸೆ ನಡೆಸುವುದು ಮತ್ತಷ್ಟು ಕಷ್ಟ, ರೋಗಿಗೆ 50 ಮಿ.ಗ್ರಾಂ ಆಂಪೋಟೋರಿಸಿಯನ್ ಎಂಬ ಚುಚ್ಚುಮದ್ದು ದಿನಾಲೂ ನೀಡಬೇಕು. ಒಂದು ಚುಚ್ಚುಮದ್ದಿನ ಬೆಲೆ 5 ಸಾವಿರದಿಂದ 7,500 ವರೆಗೂ ಇದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು