ಜೀವ ಬೆದರಿಕೆಯಿದ್ದರೂ ಪೊಲೀಸ್ಭದ್ರತೆ ನಿರಾಕರಿಸಿದ ನಟ ಸಿದ್ದಾರ್ಥ್ ... BREAKING: ಬಿಜೆಪಿಗೆ ಮುಖಭಂಗ.

 ಜೀವ ಬೆದರಿಕೆಯಿದ್ದರೂ ಪೊಲೀಸ್ಭದ್ರತೆ ನಿರಾಕರಿಸಿದ ನಟ ಸಿದ್ದಾರ್ಥ್

 

 


ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಬೆನ್ನಲೇ ನಟ ಸಿದ್ದಾರ್ಥ್

ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಇಷ್ಟಾದರೂ

ಅವರು ತಮಿಳುನಾಡು ಪೊಲೀಸರು ನೀಡುವ ಭದ್ರತೆ

ನಿರಾಕರಿಸಿದ್ದಾರೆ. ಸದ್ಯ ದೇಶದಲ್ಲಿ ಕೋವಿಡ್ ಇದೆ. ಇಂತಹ

ಸಂದರ್ಭದಲ್ಲಿ ನಮ್ಮ ಪೊಲೀಸರ ಸಮಯ ಕೋವಿಡ್

ಸಂಬಂಧಿ ಕೆಲಸಗಳಿಗೆ ವಿನಿಯೋಗವಾಗಲಿ ಎಂದು ಖಾಕಿ

 

ನೆರವನ್ನು ನಯವಾಗಿ ತಿರಸ್ಕರಿಸಿದ್ದಾರೆ. ತಮಿಳುನಾಡು

ಬಿಜೆಪಿ ನನ್ನ ಮೊಬೈಲ್ ಸಂಖ್ಯೆಯನ್ನು ಸೋರಿಕೆ

ಮಾಡಿದೆ ಎಂದು ಸಿದ್ದಾರ್ಥ್ ಇತ್ತೀಚಿಗೆ ಟ್ವಿಟ್ ಮೂಲಕ

ಆರೋಪಿಸಿದ್ದರು.


 BREAKING: ಬಿಜೆಪಿಗೆ ಮುಖಭಂಗ

 

 


ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್

ಭರ್ಜರಿ ಜಯಗಳಿಸಿದ್ದು, ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

 

ಒಟ್ಟು 39 ವಾರ್ಡ್‌ಗಳಲ್ಲಿ 21ರಲ್ಲಿ ಕಾಂಗ್ರೆಸ್ ಗೆಲುವು

ಸಾಧಿಸಿ, ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು,

ಕೇವಲ 13 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ವಿಪಕ್ಷ ಸ್ಥಾನಕ್ಕೆ

ತೃಪ್ತಿಪಡೆದುಕೊಂಡಿದೆ. ಉಳಿದ 5 ಸ್ಥಾನಗಳು ಪಕ್ಷೇತರರ

ಪಾಲಾಗಿದೆ. ಇನ್ನು, ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ

ಸೋಮಶೇಖರ ರೆಡ್ಡಿ ಪುತ್ರ ಜಿ.ಶ್ರವಣಕುಮಾರ್ ರೆಡ್ಡಿ ಸಹ

ಸೋತಿದ್ದಾರೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು